Sunday, January 28, 2024
ಹರಿಶಿನ ಬುರುಡೆ ( Golden Orile)
ಹರಿಶಿನ ಬುರುಡೆ, ಮದುವಣಗಿತ್ತಿ, ಎಂದು ಕರೆಸಿಕೊಳ್ಳುವ ಈ ಹಕ್ಕಿ ವಲಸೆ ಹಕ್ಕಿ ಯಾಗಿದ್ದು, ಚಳಿಗಾಲದಲ್ಲಿ ಇದು ನೇಪಾಳ, ಕಾಶ್ಮೀರದಿಂದ ದಕ್ಷಿಣ ಭಾರತದ ಕಡೆ ವಲಸೆ ಬರುತ್ತವೆ.
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Monday, December 18, 2023
ನೀಲಕಂಠ( Indian Rollar)
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Sunday, August 20, 2023
ಕಿರಿಯ ಸಿಪಾಯಿ ಕೊಕ್ಕರೆ (Lesser Adjent Stork) Assami : Hargila
ಕಿರಿಯ ಸಿಪಾಯಿ ಕೊಕ್ಕರೆ ( ಲೇಸರ್ ಅಡ್ಜೆಂಟ್ ಸ್ಟಾರ್ಟ್) Lesser Adujent Stork.
ಕನ್ನಡದಲ್ಲಿ ಕಿರಿಯ ಸಿಪಾಯಿ ಕೊಕ್ಕರೆ ಎಂದು ಕರೆಯುವ ಈ ಕೊಕ್ಕರೆ ಕೊಕ್ಕರೆಗಳಲ್ಲಿಯೇ ಅತಿ ದೈತ್ಯ ಗಾತ್ರದ್ದು. ಇದು ಗ್ರೇಟ್ ಅಡಜಂಟ್ ತರಹವೇ ಇದೆ.
ಇದರ ಎತ್ತರ 4 ರಿಂದ 5 ಅಡಿ. ರೆಕ್ಕೆಗಳನ್ನ ಬಿಚ್ಚಿದಾಗ ಎಂಟರಿಂದ ಒಂಬತ್ತು ಅಡಿ ಇದರ ರೆಕ್ಕೆಗಳು ಇರುತ್ತವೆ. ಈ ಪಕ್ಷಿ ಬರೋಬ್ಬರಿ 5 ರಿಂದ 8 ಕೆಜಿ ತೂಗುತ್ತದೆ. ಇಂಟರ್ನ್ಯಾಷನಲ್ ಯೂನಿಯನ್ ಆಫ್ ಕನ್ಸರ್ವೇಷನ್ ಆಫ್ ನೇಚರ್ ಈ ಒಕ್ಕೂಟವು ಕಿರಿಯ ಸಿಪಾಯಿ ಕೊಕ್ಕರೆಯನ್ನು ಅಳಿವಿನಂಚಿನಲ್ಲಿರುವ ಪಕ್ಷಿ ಎಂದು ಕೆಂಪು ಪಟ್ಟಿಯಲ್ಲಿ ಸೇರಿಸಿದೆ. ಇಂತಹ ಪಕ್ಷಿಯನ್ನು ನಾನು ನಾಲ್ಕು ವರ್ಷದ ಹಿಂದೆಯೇ ಅಲ್ಲೀಪುರದ ಡ್ಯಾಂ ನ ಹಿನ್ನೀರ ಪ್ರದೇಶದಲ್ಲಿ ನೋಡಿ ಅದರ ಅಜಾನುಬಾಹು ಆಕಾರನೋಡಿ ಕ್ಲಿಕ್ಕಿಸಿದ್ದೆ. ಆದರೆ ಈ ಪಕ್ಷಿಯ ಬಗ್ಗೆ ಮಾಹಿತಿಯ ಕೊರತೆಯಿಂದ ಸುಮ್ಮನಾದೆ. ಮೊನ್ನೆ ಯಾವುದೋ ಹಳೆಯ ದಿನಪತ್ರಿಕೆಯಲ್ಲಿ ಈ ಪಕ್ಷಿಯ ಸಂರಕ್ಷಣೆ ಮಾಡಿದ ಮಹಿಳೆ ಪೂರ್ಣಿಮಾ ಬರ್ಮನ್ ರವರ ಬಗ್ಗೆ "ಹರ್ಗಿಲಾ ಆರ್ಮಿ" ಎಂಬ ಲೇಖನ ಓದಿದೆ.ಅದರಲ್ಲಿ ಹರ್ಗಿಲಾ (Great Adjunt Stork) ಎಂಬ ಪಕ್ಷಿಯ ಬಗ್ಗೆ ಓದುತ್ತಾ ಹೋದಂತೆ ತಟ್ಟನೆ ನಾಲ್ಕು ವರ್ಷದ ಹಿಂದೆ ಕ್ಲಕ್ಕಿಸಿದ್ದ ಇದೇ ತರಹದ ಪಕ್ಷಿಯ ನೆನಪಾಗಿ ಕಂಪ್ಯೂಟರ್ ನಲ್ಲಿ ಸೇವ್ ಆಗಿದ್ದ ನೂರಾರು ಫೋಟೋ ಹುಡುಕಾಡಿದಾಗ ಆ ಪಕ್ಷಿಯ, 8_,10 ಫೋಟೋಗಳು ಸಿಕ್ಕಿದವು. ಲೇಖನದಲ್ಲಿರುವ ಪಕ್ಷಿಗೂ ಹೋಲಿಕೆಯಲ್ಲಿ ಸ್ವಲ್ಪ ವ್ಯತ್ಯಾಸವಿತ್ತು. ಸಲೀಂ ಅಲಿಯವರ Indian Birds ಪುಸ್ತಕವನ್ನು ನೋಡಿದ ಮೇಲೆ ಗೊತ್ತಾಯ್ತು ಇದು ಕಿರಿಯ ಸಿಪಾಯಿ ಕೊಕ್ಕರೆ ಎಂದು. ನಾಲ್ಕು ವರ್ಷದ ಹಿಂದೆ, ಅದು ಮುಂಗಾರು ಶುರುವಾಗುವ ಸಮಯ ; ಕ್ಯಾಮರಾ ಹೆಗಲಿಗೇರಿಸಿ ಅಲ್ಲೀಪುರದ ಡ್ಯಾಂನ ಹಿನ್ನೀರಿನ ದಡದಲ್ಲಿ ಕ್ಯಾಮರಾ ಹಿಡಿದು ಹೊರಟೆ. ಆ ಹಿನ್ನೀರಿನ ಮೊಳಕಾಲು ಉದ್ದದ ನೀರಿನಲ್ಲಿ ಲೇಸರ್ ರೆಸ್ಲಿಂಗ್ ಡಕ್, ದೊಡ್ಡ ನೀರ ಕಾಗೆ, ಚುಕ್ಕೆ ಕೊಕ್ಕು ಬಾತುಕೋಳಿ, ಕೆನ್ನೀಲಿ ಬಕ, ಇವುಗಳ ಗುಂಪಿನಲ್ಲಿ ಒಂದು ದೊಡ್ಡ ದೈತ್ಯ ಪಕ್ಷಿ ನನಗೆ ಕಂಡಿತು. ಅದು ನೀರಿನಲ್ಲಿ ಜಲಚರಗಳನ್ನ ಹಿಡಿದು ತಿನ್ನೋದರಲ್ಲಿ ನಿರತವಾಗಿತ್ತು. ಒಂದೆರಡು ಫೋಟೋಗಳನ್ನು ಕ್ಲಿಕ್ಕಿಸಿದ ನಂತರ ಅದು ಹಾರಿ ದಡದ ಮೇಲೆ ಬಂದು ಕುಳಿತುಕೊಂಡಿತು. ಅದು ಕುಳಿತುಕೊಂಡ ಜಾಗ ಕಸ ಕಡ್ಡಿಯಿಂದ ಕೂಡಿದ ಕೊಳಕು ಜಾಗವಾಗಿತ್ತು. ಇನ್ನು ನಾಲ್ಕೈದು ಫೋಟೇ ಕ್ಲಿಕ್ಕಿಸಿದ ಮೇಲೆ . ಅದು ಹಾರಲು ರೆಕ್ಕೆಗಳನ್ನು ಬಿಚ್ಚಿತು. ಅದು ರೆಕ್ಕೆ ಬಿಚ್ಚಿದಾಗ ಎಂಟರಿಂದ ಒಂಬತ್ತು ಅಡಿ ಅಗಲವಾಗಿತ್ತು. ನೋಡಿ ರೋಮಾಂಚನವಾಯ್ತು. ಅದು ಮೇಲೆ ಟೇಕಾಪ್ ಮಾಡುವಾಗ ಅಲ್ಲಿದ್ದ ಹಕ್ಕಿಗಳೆಲ್ಲ ಚದುರಿಹೋದವು. ಅದು ಸ್ವಲ್ಪ ಎತ್ತರದವರೆಗೆ ರೆಕ್ಕೆಗಳನ್ನು ಬಡಿಯುತ್ತ ಹಾರಿ, ನಂತರ ರೆಕ್ಕೆಗಳನ್ನು ಬಡಿಯದೇ ರೆಕ್ಕೆಗಳನ್ನು ಚಾಚಿ ವೃತ್ತಾಕಾರವಾಗಿ ಮೇಲೇರುತ್ತಿತ್ತು! ಏರುತ್ತ ಏರುತ್ತ ಸಣ್ಣ ಚುಕ್ಕಿಯಷ್ಟಾಯಿತು. ನಂತರ ಆಕಾಶದ ನೀಲಿಯಲ್ಲಿ ಮಾಯವಾಯಿತು. ಬಿಸಿಲಿಗೆ ಕಾದ ಬಿಸಿಗಾಳಿ ಮೇಲೇರುತ್ತದೆ. ಈ ಗಾಳಿಗೆ ರೆಕ್ಕೆಗಳನ್ನು ಒಡ್ಡಿ ಗಾಳಿಯ ಜೊತೆಗೇ ಮೇಲೇರುತ್ತೆ ಈ ಪಕ್ಷಿ.
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Sunday, December 25, 2022
ನೀಲಿ ಮುಖದ ಕೈರಾತ
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Wednesday, October 5, 2022
ಹಸಿರು ಪಾರಿವಾಳ
ಈ ದಿನ ಬನ್ನಿ ಮುಡಿಯೋ ಹಬ್ಬ . ಅಂದ್ರೆ ದಸರಾ ಹಬ್ಬದ ದಿನ ಬನ್ನಿ ಸೊಪ್ಪನ್ನು ತರೋಣ ಎಂದು ಸಂಜೆ 4 ಗಂಟೆಗೆ ಊರ ಹೊರಗೆ ಹೊರಟೆ. ಹೋಗುವಾಗ ಹಕ್ಕಿಗಳ ಛಾಯಾಗ್ರಹಣಕ್ಕೆ ಕ್ಯಾಮೆರಾನೂ ತೆಗೆದುಕೊಂಡೆ. ಹಡಗಲಿ ಮುಂಡರಗಿ ರಸ್ತೆಯ ಎಡಬಲಗಳಲ್ಲಿ ಬನ್ನಿಗಿಡವನ್ನು ಹುಡುಕುತ್ತಾ , ಪೈರುತುಂಬಿ ಬೀಗುವ ಹೊಲಗಳಲ್ಲಿ ಪಕ್ಷಿಗಳನ್ನು ಹರಸುತ್ತಾ4 ಕಿಮೀ ಹೋಗಿದ್ದೆ, ಬನ್ನಿಗಿಡ ಸಿಕ್ಕಿತು ಬನ್ನಿ ಸೊಪ್ಪನ್ನು ಬಿಡಿಸಿಕೊಂಡು ಬೈಕ್ ಶುರುಮಾಡಬೇಕು ಎನ್ನುವಷ್ಟರಲ್ಲಿ ಎರಡು ಬೆಳವ ಜೋಳದ ಹೊಲದಲ್ಲಿ ಜೋಳದ ತೆನೆಯ ಕಾಳನ್ನು ತಿನ್ನುವುದು ಕಂಡೆ, ಮೆಲ್ಲನೆ 📷 ಕ್ಯಾಮೆರಾ ಎತ್ತಿಕೊಂಡು ನಿಧಾನವಾಗಿ ಹೆಜ್ಜೆ ಹಾಕುತ್ತಾ ಒಂದು ಗಿಡದ ಮರೆಯಲ್ಲಿ ನಿಂತು ಕ್ಲಿಕ್ಕಿಸಿದೆ, ಅವುಗಳ ಪಕ್ಕದಲ್ಲಿ ನಾಲ್ಕೈದು ಹಸಿರು ಪಾರಿವಾಳಗಳು ಕಾಳು ಮೇಯುದನ್ನು ನೋಡಿ ರೋಮಾಂಚನವಾಯ್ತು. ಅವುಗಳ ಬಣ್ಣ ಹಸಿರಾದದ್ದರಿಂದ ಹಸಿರು ಬೆಳೆಯ ನಡುವೆ ನನಗೆ ಬೇಗ ಗುರುತಿಸಲು ಆಗಲಿಲ್ಲ. ನಾನು 8 ವರ್ಷಗಳ ಪಕ್ಷಿ ಅಧ್ಯಯನದಲ್ಲಿ ಎಂದೂ ಸಿಗದ, ದಾಖಲಾಗದ ಅಪರೂಪದ ಅತಿಥಿಗಳನ್ನು ನೋಡಿ ಮಹಾದಾನಂದವಾಯ್ತು. ಅವುಗಳ 7,8 ಫೋಟೊ ಕ್ಲಿಕ್ಕಿಸಿದೆ. ತಲ್ಲೀನತೆ ಯಿಂದ ಮೇಯುತ್ತಿದ್ದ ಅವು, ನನ್ನು ನೋಡಿದ್ದೇ ಹಾರಿಹೋದವು. ಹಸಿರು ಪಾರಿವಾಳಗಳು ಪಶ್ಚಿಮ ಘಟ್ಟಗಳಲ್ಲಿ, ನಿತ್ಯ ಹರಿದ್ವರ್ಣ ಕಾಡುಗಳಲ್ಲಿ, ಹಿಮಾಲಯ ಪರ್ವತ ತಪ್ಪಲಿನಲ್ಲಿ ದೊಡ್ಡ ಮರಗಳ ಮೇಲೆ ವಾಸ ಮಾಡುವ ಇವುಗಳನ್ನು ಹಸಿರು ಎಲೆಗಳ ನಡುವೆ ಗುರುತಿಸುವುದು ಕಷ್ಟ. ಮಲೆನಾಡಿನಲ್ಲಿ ವಾಸಿಸುವ ಇವು ಬಯಲುಸೀಮೆ ಹೂವಿನಹಡಗಲಿ ಯಲ್ಲಿ ಕಾಣಿಸಿದ್ದು, ಆಶ್ಚರ್ಯ ಉಂಟುಮಾಡಿದೆ. ಬಹುಶಃ ಇವು ಆಹಾರದ ಅನ್ವೇಷಣೆಯಲ್ಲಿ ವಲಸೆ ಹೋಗುವಾಗ ಕೆಲಕಾಲ ಇಲ್ಲಿ ತಂಗಿವೆ ಎನಿಸುತ್ತದೆ. ಮಳೆಗಾಲದ ಪ್ರಾರಂಭದಲ್ಲಿ ಸಂಡೂರಿನ ಕಾಡಿನತ್ತ ಈ ಪಕ್ಷಿಗಳು ವಲಸೆ ಬರುತ್ತವೆ. ನಂತರ ಸೆಪ್ಟೆಂಬರ್-ಅಕ್ಟೋಬರ್ ಕೊನೆಯಲ್ಲಿ ತಮ್ಮ ಮೂಲಸ್ಥಾನಕ್ಕೆ ತೆರಳುತ್ತವೆ. ಇವು ಬಹಳ ನಾಚಿಕೆ ಸ್ವಭಾವದವು. ಹಸಿರು ಪಾರಿವಾಳಗಳು ಮಹಾರಾಷ್ಟ್ರದ ರಾಜ್ಯಪಕ್ಷಿಯಾಗಿದೆಅಲ್ಲಿ ಹರಿಯಾಲ್ ಎಂಬ ಹೆಸರಿನಿಂದ ಕರೆಯಲಾಗುತ್ತಿದೆ. ಹಳದಿ ಬಣ್ಣದ ಕಾಲುಗಳನ್ನು ಹೊಂದಿದ್ದು, ಹಿಂಡಿನಲ್ಲಿ 7,8 ಪಕ್ಷಿಗಳು ಇರುತ್ತವೆ. ಇವುಗಳ ಇನ್ನೊಂದು ವಿಶೇಷತೆ ಏನೆಂದರೆ ಇವು ನೆಲದ ಮೇಲೆ ಕುಳಿತುಕೊಳ್ಳುವುದೇ ಇಲ್ಲ.
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Sunday, October 11, 2020
"ಜಾತಕ ಪಕ್ಷಿಯ ಜಾತಕ " (paid cocko)
"ಜಾತಕ ಪಕ್ಷಿಯ ಜಾತಕ " (paid cocko)
ಮುಂಗಾರು ಮಳೆಗೂ ಚಾತಕ ಪಕ್ಷಿಗೂ ರೈತರಿಗೂ ಆದಿ ಕಾಲದಿಂದಲು ಅವಿನಾಭಾವ ಸಂಬಂಧ. ಮೇಲಿಂದ ಬೀಳುವ ಮಳೆ ನೀರು ಕುಡಿಯಲು ಗಂಟೆ ಗಟ್ಟಲೆ ಕಾದು ಕುಳಿತಿರುತ್ತೆ ಈ ಪಕ್ಷಿ.
ಹೌದು ಜಾತಕ ಪಕ್ಷಿ ಕೋಗಿಲೆ ಗಣಕ್ಕೆ ಸೇರಿದ ಪಕ್ಷಿಯಾಗಿದೆ. ದಕ್ಷಿಣ ಆಫ್ರಿಕಾ ಮತ್ತು ಏಷ್ಯಾದಲ್ಲಿ ಕಂಡುಬರುತ್ತದೆ. ಇದು ಭಾಗಶಃ ವಲಸೆ ಮಾಡುವ ಪಕ್ಷಿಯಾಗಿದ್ದು, ಒಂದೇ ಕಡೆ ನೆಲೆ ಊರಲಾರದು. ವಿಶೇಷ ಅಂದ್ರೆ ಮುಂಗಾರು ಋತುವಿನ ಮಳೆಯ ಪ್ರಾರಂಭಕ್ಕು ಮತ್ತು ಚಾತಕ ಪಕ್ಷಿಗೂ ಅವಿನಾಭಾವ ಸಂಭಂಧವಿದೆ. ಈ ಪಕ್ಷಿಯನ್ನ ಇಂಗ್ಲಿಷ್ನಲ್ಲಿ Pied Cuckoo, Jacobin Cuckoo, or Pied Crested Cuckoo ಎಂದು ಕರೆಯುತ್ತಾರೆ.
ಭಾರತೀಯ ಜಾನಪದ ಮತ್ತು ಪುರಾಣಗಳಲ್ಲಿ ಈ ಪಕ್ಷಿಗೆ ವಿಶೇಷ ಸ್ಥಾನವಿದೆ. ಮಳೆಗಾಲದಲ್ಲಿ ಕೇವಲ ನಾಲ್ಕು ಹನಿ ನೀರಿಗೆ ಈ ಚಾತಕಪಕ್ಷಿ ಎಷ್ಟೋ ಗಂಟೆ, ಎಷ್ಟೋ ದಿನಗಳ ಕಾಲ ಕಾದು ಕುಳಿತಿರುತ್ತದೆ. ಮೇ ತಿಂಗಳ ಕೊನೆಗೆ ಮತ್ತು ಜೂನ್ ತಿಂಗಳಲ್ಲಿ ಇದ್ದಕ್ಕಿದ್ದಂತೆ ಚಾತಕಪಕ್ಷಿ ರೈತರ ಕಣ್ಣಿಗೆ ಬೀಳುತ್ತದೆ. ಇದು ಮನುಷ್ಯರಿಗೆ ಕಾಣಿಸಿಕೊಂಡರೆ ಆ ಭಾಗದಲ್ಲಿ ಖಂಡಿತ ಮಳೆ ಆಗುತ್ತದೆ ಎನ್ನುತ್ತದೆ ನಮ್ಮ ಜನಪದ ನಂಬಿಕೆ.ಚಾತಕ ಪಕ್ಷಿಗೆ ಅದರ ತಲೆಯ ಮೇಲೆ ಕೊಕ್ಕೆ ತರಹದ ಪುಕ್ಕ ಇರುವುದರಿಂದ ಗ್ರಾಮೀಣ ಭಾಗದ ರೈತರು ಜುಟ್ಟು-ಕೋಗಿಲೆಯಂತಲೂ ಇದನ್ನ ಕರೆಯುತ್ತಾರೆ. ಆ ಕೊಕ್ಕೆಯಲ್ಲಿಯೇ ಅದು ಜೀವಜಲವನ್ನು ಸಂಗ್ರಹ ಮಾಡಿಕೊಂಡು ಹನಿ ಹನಿ ನೀರು ಕುಡಿಯುತ್ತದೆ. ಇದು ಉಳಿದ ಪಕ್ಷಿಗಳಂತೆ ಕೆರೆ ನೀರು, ನದಿ ನೀರು ಮತ್ತು ನಿಂತ ನೀರನ್ನು ಕುಡಿದರೂ ಸಹ, ಮುಂಗಾರಿನ ಪ್ರಥಮ ಮಳೆಹನಿಗಳಿಗಾಗಿ ವರುಣ ದೇವರಲ್ಲಿ ಪ್ರಾರ್ಥಿಸುತ್ತದೆಯಂತೆ. ಅದರ ಪ್ರಾರ್ಥನೆಯನ್ನು ಪ್ರತಿ ಸಲ ವರಣ ದೇವನು ಮನ್ನಿಸುತ್ತಾ ನೀರುಣಿಸುತ್ತಾನೆ ಎಂಬ ಪ್ರತೀತಿ ಇದೆ. ಚಾತಕ ಪಕ್ಷಿಯ ನೀರಡಿಕೆ ತಣಿಸಲು ಮಳೆ ಆಗುತ್ತದೆ ಎಂಬುದು ಪೂರ್ವಜರ ಮಾತು. ಈ ಪಕ್ಷಿಯ ವಿಶೇಷವೆಂದರೆ ಇದು ನೀರಿಲ್ಲದೆ ಎಷ್ಟೋ ದಿನಗಳವರೆಗೆ ಬದುಕಬಲ್ಲದು. ಈ ಪಕ್ಷಿ ಕುರಿತು ಕವಿರತ್ನ ಕಾಳಿದಾಸ ಕೂಡ ತನ್ನ ಮೇಘದೂತ ಕಾವ್ಯದಲ್ಲಿ ಪ್ರಸ್ತಾಪಿದ್ದಾನೆ. ಚಾತಕ ಪಕ್ಷಿಯ ಈ ವಿಶೇಷ ಗುಣದಿಂದಾಗಿ ಇದನ್ನು ಮುಂಗಾರು ಮಳೆಯ ಮುನ್ಸೂಚಕ ಎಂದು ಪರಿಗಣಿಸಲಾಗುತ್ತದೆ.
ಇದು ಮಧ್ಯಮ ಗಾತ್ರದ ತೆಳ್ಳಗಿರುವ ಕಪ್ಪು ಮತ್ತು ಬಿಳಿ ರೆಶ್ಮೆಯಂತ ಜುಟ್ಟನ್ನು ಮತ್ತು ರೆಕ್ಕೆಗಳ ಮೇಲೆ ಬಿಳಿ ರೆಕ್ಕೆಪಟ್ಟಿಗಳನ್ನು ಹೊಂದಿರುವುದರಿಂದ ನೋಡಲು ತುಂಬಾ ಆಕರ್ಶಕವಾಗಿ ಕಾಣುತ್ತದೆ. ಚಾತಕ-ಹೆಣ್ಣು ಹಕ್ಕಿಯು ಮೊಟ್ಟೆಯನ್ನು ಬೇರೆ ಪಕ್ಷಿಗಳ ಗೂಡುಗಳಲ್ಲಿಡುವುದರಿಂದ ಇದನ್ನು ಪ್ಯಾರಸೈಟ್ ಬ್ರೀಡರ್-(ಪರಾವಲಂಬಿ ಸಂಸಾರಿ) ಎನ್ನುತ್ತಾರೆ. ಆವಾಸ ನಾಶ, ಆಧುನಿಕವಾಗಿ ಬದಲಾದ ಕೃಷಿ ಪದ್ಧತಿ ಮತ್ತು ರಸ್ತೆ ಅಪಘಾತಗಳಲ್ಲಿಯು ಸಹ ಇವು ಸಾವನ್ನುಪ್ಪುವದರಿಂದ ಈ ಹಕ್ಕಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಇಳಿಕೆಯಾಗಿದೆ. ಹಡಗಲಿಯ ಅಲ್ಲಿಲ್ಲಿ ತೋಟಗಳಲ್ಲಿ ಈ ಪಕ್ಷಿ ಕಾಣಸಿಗುತ್ತದೆ. ಇದು ಜನರ ಕಣ್ಣಿಗೆ ಬೀಳೋದು ಅಪರೂಪ. ನಿನ್ನೆ ನಾನು ಅಲ್ಲೀಪುರದ ಹೊಲಕ್ಕೆ ಹೋದಾಗ ಚಾತಕ ಕ್ಷಿಯನ್ನು ಕಂಡು ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದೇನೆ. ವಿಶೇಷ ಅಂದ್ರೆ ಮುಂಗಾರು ಋತುವಿನಲ್ಲಿ ಹಡಗಲಿಯ ನೀರಾವರಿ ಪ್ರದೇಶ ಹಾಗೂ ತಂಪಾದ ಪ್ರದೇಶದಲ್ಲಿ ಇದುಹೆಚ್ಚಾಗಿ ಕಾಣಸಿಗುತ್ತವೆ. ಆದ್ರೆ ಬೇರೆ ಪಕ್ಷಿಗಳಂತೆ ಹಿಂಡು ಹಿಂಡಾಗಿ ಇವು ಕಾಣಸಿಗುವುದಿಲ್ಲ, ಒಂದೋ ಎರಡೋ ಹಕ್ಕಿಗಳು ಕಾಣಸಿಗುತ್ತೆ
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
Tuesday, March 3, 2020
(ಕಾಜಾಣ ಪಕ್ಷಿಯ ಪರಿಚಯಾತ್ಮಕ ಲೇಖನ)
ನನ್ನ ಹೆಸರು "ಕಾಜಾಣ ಪಕ್ಷಿ" ಅಂತ. ನಾನು ಕಳ್ಳತನ ಮಾಡಿ ಹೊಟ್ಟೆ ಹೊರೆಯುವುದನ್ನು ನೋಡಿ ಈ ಮನುಷ್ಯ ನನಗೆ ಈ ಹೆಸರು ಇಟ್ಟಿರ ಬಹುದು. ಕಳ್ಳ +ಜಾಣ =ಕಾಜಾಣ , ಅಂದರೆ ಕಳ್ಳ ಜಾಣ ಅನ್ನೋ ಹೆಸರೇ ಕಾಜಾಣ ಅಂತ ಆಗಿರಬಹುದು. ಪ್ರಾಣಿಗಳಲ್ಲಿಯೂ ನಮ್ಮಂತಹ ಕಳ್ಳರಿದ್ದಾರ್ರೀ. ಕಳ್ ನರಿಯಣ್ಣ ನಮ್ಮ ಕುಲ ಕಸುಬನ್ನು(ಕಳ್ಳತನ) ಪ್ರಸಿದ್ಧ ಮಾಡಿದವ. ನಮ್ ಗುರು. ನಾವು ಗಾತ್ರದಲ್ಲಿ ಸಣ್ಣವರಿದ್ದರೂ ನಮಗಿಂತ ಐದಾರು ಪಟ್ಟು ದೊಡ್ಡವಾದ ಹದ್ದು, ಕಾಗೆ ಮುಂತಾದ ಹಕ್ಕಿಗಳ ಬೆನ್ನು ಹತ್ತಿ ಕಾಡಿಸಿ, ಪೀಡಿಸಿ ಅವು ಬೇಟೆಯಾಡಿದ.ಬೇಟೆಯನ್ನು ಕಿತ್ತುಕೊಳ್ಳುತ್ತೇವೆ. ಕಳ್ಳರು ಮುಖಕ್ಕೆ ಸಾಮಾನ್ಯವಾಗಿ ಕಪ್ಪನೆಯ ಮಂಕಿ ಟೋಪಿ ಹಾಕ್ಕೊಂಡು ಕಳ್ಳತನ ಮಾಡ್ತರೆ. ನಾವು ಜನ್ಮ ತಹ ಕಳ್ಳರು ನಮ್ಮ ದೇಹದ ಬಣ್ಣ ಕಡುಗಪ್ಪು. ಕಳ್ಳರ ವೇಷ ದೇವರೇ ಹಾಕಿ ಕಳೀಸಿದ್ದಾನೆ ನಮಗೆ. ಆದ್ರು ನಾವು ಕರುಣಾಳುಗಳು. ಮನುಷ್ಯರ ತರಹ ದೈಹಿಕ ಹಿಂಸೆ ಮಾಡಿ ಕಳ್ಳತನ ಮಾಡೋದಿಲ್ಲ. ಸಮುದ್ರದ ಹಡಗುಗಳ ಕಳ್ಳರನ್ನು (ಕಡಗ್ಗಳ್ಳರನ್ನು) "ಪೈರೇಟ್ಸ್" ಅಂತಾರೆ. ನಾವು ಆಕಾಶದಲ್ಲಿ ಕಳ್ಳತನ ಮಾಡೋದ್ರಿಂದ ನಮ್ಮನ್ನ "ಪ್ಲೈರೇಟ್ಸ್" Flyrates ಕನ್ನಡದಲ್ಲಿ "ಆಕಾಶ ಕಳ್ಳರು " ಆಂತಾ ಕರೀಬಹುದು.
ನಾವು ಮೈನಾ, ಕೋಗಿಲೆ ಮುಂತಾದ ಹಕ್ಕಿಗಳ ಧ್ವನಿಯನ್ನು ಥೇಟ್ ಹಾಗೆಯೇ ಅನುಕರಣೆ ಮಾಡ ಬಲ್ಲೆವು. ಈ ಅನುಕರಣೆಯ ಕಲೆಯನ್ನು ನಾವು ಬೇಟೆಯ ದಾರಿ ತಪ್ಪಿಸಲು ಮಾಡುತ್ತೇವೆ. ಸಾವಿರಾರು ಮಿಡತೆಗಳನ್ನು, ಕ್ರಿಮಿ ಕೀಟಗಳನ್ನು ತಿಂದು ರೈತರಿಗೆ ಉಪಕಾರಿಯಾಗೀದ್ದೇನೆ ನಾನು. ನಾನು "ಕುವೆಂಪು"ರವರಿಗೆ ಅಚ್ಚುಮೆಚ್ಚಿನ ಪಕ್ಷಿಯಾಗಿದ್ದೆ. ಅಂದ್ದರಿಂದಲೇ ಅವರು ತಮ್ಮ ಕವನ ಸಂಕಲನಕ್ಕೆ ಕಾಜಾಣ ಅಂತ ಹೆಸರಿಟ್ಟಿದ್ದಾರೆ. ಹೊಲ ಗದ್ದೆಗಳಲ್ಲಿ ನಾನು ಕಂಡರೆ ಗುರುತಿಸುವುದನ್ನು ಮರೆಯಬೇಡಿ.
ನಾನು ವೃತ್ತಿಯಲ್ಲಿ ಕನ್ನಡ ಶಿಕ್ಷಕನಾಗಿ ಕರ್ನಾಟಕ ಪಬ್ಲಿಕ್ ಶಾಲೆ ,ಪ್ರೌಢಶಾಲಾ ವಿಭಾಗ, ಹಿರೇಹಡಗಲಿ, ಹಡಗಲಿ ತಾಲೂಕು, ವಿಜಯನಗರ ಜಿಲ್ಲೆಯಲ್ಲಿ ಸೇವೆಸಲ್ಲಿಸುತ್ತಿದ್ದೇನೆ. ಪಕ್ಷಿಗಳ ಛಾಯಾಗ್ರಹಣ, ಹಕ್ಕಿಗಳ ವೀಕ್ಷಣೆ, ಅವುಗಳನ್ನು ವೈಜ್ಞಾನಿಕವಾಗಿ ದಾಖಲೀಕರಣ ಮಾಡುವುದು ನನಗೆ ಇಷ್ಟವಾದ ಹವ್ಯಾಸ, ಪ್ರವೃತ್ತಿಯಾಗಿದೆ.
-
"ಮೋಹಕ ಬಾಲದ ಬಲದಂಡೆ ಹಕ್ಕಿ" ಪ್ರಾಣಿ ಪಕ್ಷಿಗಳ ಲೋಕ ವಿಸ್ಮಯಗಳ ಆಗರ. ಚಳಿಗಾಲದ ಭಾನುವಾರದ ಮುಂಜಾನೆ ಕ್ಯಾಮರಾ ಹೆಗಲೇರಿಸಿ ಹಡಗಲಿಯ ಸಮೂಹ ಸಂಪನ್ಮೂಲ ಕೇಂದ್ರ ...
-
""ನತ್ತಿಂಗ"" (Night jar) ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ವಾಪಾಸ್ ಹಡಗಲಿಗೆ ಬರುವಾಗ ಆಗಲೇ ಕತ್ತಲಾಯಿತು. ಐನಳ್ಳಿ ಅಲ್ಲೀಪುರದ ...






