ಕಾಜಾಣ Indian Drongo

""..."ಜಾಣ ಜಾಣ ಕಾಜಾಣ""

""ಕಾಜಾಣದ ಸ್ವಗತ"""
(ಕಾಜಾಣ ಪಕ್ಷಿಯ ಪರಿಚಯಾತ್ಮಕ  ಲೇಖನ)

ನನ್ನ ಹೆಸರು "ಕಾಜಾಣ ಪಕ್ಷಿ"  ಅಂತ.  ನಾನು ಕಳ್ಳತನ ಮಾಡಿ ಹೊಟ್ಟೆ ಹೊರೆಯುವುದನ್ನು ನೋಡಿ ಈ ಮನುಷ್ಯ ನನಗೆ ಈ ಹೆಸರು ಇಟ್ಟಿರ ಬಹುದು. ಕಳ್ಳ +ಜಾಣ =ಕಾಜಾಣ , ಅಂದರೆ ಕಳ್ಳ ಜಾಣ ಅನ್ನೋ ಹೆಸರೇ ಕಾಜಾಣ ಅಂತ ಆಗಿರಬಹುದು. ಪ್ರಾಣಿಗಳಲ್ಲಿಯೂ ನಮ್ಮಂತಹ  ಕಳ್ಳರಿದ್ದಾರ್ರೀ. ಕಳ್ ನರಿಯಣ್ಣ ನಮ್ಮ ಕುಲ ಕಸುಬನ್ನು(ಕಳ್ಳತನ) ಪ್ರಸಿದ್ಧ ಮಾಡಿದವ. ನಮ್ ಗುರು. ನಾವು ಗಾತ್ರದಲ್ಲಿ ಸಣ್ಣವರಿದ್ದರೂ ನಮಗಿಂತ ಐದಾರು ಪಟ್ಟು ದೊಡ್ಡವಾದ ಹದ್ದು, ಕಾಗೆ ಮುಂತಾದ ಹಕ್ಕಿಗಳ ಬೆನ್ನು ಹತ್ತಿ ಕಾಡಿಸಿ,  ಪೀಡಿಸಿ ಅವು ಬೇಟೆಯಾಡಿದ.ಬೇಟೆಯನ್ನು ಕಿತ್ತುಕೊಳ್ಳುತ್ತೇವೆ. ಕಳ್ಳರು ಮುಖಕ್ಕೆ ಸಾಮಾನ್ಯವಾಗಿ ಕಪ್ಪನೆಯ ಮಂಕಿ ಟೋಪಿ ಹಾಕ್ಕೊಂಡು ಕಳ್ಳತನ ಮಾಡ್ತರೆ. ನಾವು ಜನ್ಮ ತಹ ಕಳ್ಳರು ನಮ್ಮ ದೇಹದ ಬಣ್ಣ ಕಡುಗಪ್ಪು. ಕಳ್ಳರ ವೇಷ ದೇವರೇ ಹಾಕಿ ಕಳೀಸಿದ್ದಾನೆ ನಮಗೆ. ಆದ್ರು ನಾವು ಕರುಣಾಳುಗಳು. ಮನುಷ್ಯರ ತರಹ ದೈಹಿಕ ಹಿಂಸೆ ಮಾಡಿ ಕಳ್ಳತನ ಮಾಡೋದಿಲ್ಲ.  ಸಮುದ್ರದ ಹಡಗುಗಳ ಕಳ್ಳರನ್ನು (ಕಡಗ್ಗಳ್ಳರನ್ನು) "ಪೈರೇಟ್ಸ್" ಅಂತಾರೆ. ನಾವು ಆಕಾಶದಲ್ಲಿ ಕಳ್ಳತನ ಮಾಡೋದ್ರಿಂದ ನಮ್ಮನ್ನ "ಪ್ಲೈರೇಟ್ಸ್" Flyrates ಕನ್ನಡದಲ್ಲಿ "ಆಕಾಶ ಕಳ್ಳರು " ಆಂತಾ ಕರೀಬಹುದು.
ನಾವು ಮೈನಾ, ಕೋಗಿಲೆ ಮುಂತಾದ ಹಕ್ಕಿಗಳ ಧ್ವನಿಯನ್ನು ಥೇಟ್ ಹಾಗೆಯೇ ಅನುಕರಣೆ ಮಾಡ ಬಲ್ಲೆವು. ಈ ಅನುಕರಣೆಯ ಕಲೆಯನ್ನು ನಾವು ಬೇಟೆಯ ದಾರಿ ತಪ್ಪಿಸಲು ಮಾಡುತ್ತೇವೆ. ಸಾವಿರಾರು ಮಿಡತೆಗಳನ್ನು, ಕ್ರಿಮಿ ಕೀಟಗಳನ್ನು ತಿಂದು ರೈತರಿಗೆ ಉಪಕಾರಿಯಾಗೀದ್ದೇನೆ ನಾನು. ನಾನು  "ಕುವೆಂಪು"ರವರಿಗೆ ಅಚ್ಚುಮೆಚ್ಚಿನ ಪಕ್ಷಿಯಾಗಿದ್ದೆ. ಅಂದ್ದರಿಂದಲೇ ಅವರು ತಮ್ಮ ಕವನ ಸಂಕಲನಕ್ಕೆ ಕಾಜಾಣ ಅಂತ ಹೆಸರಿಟ್ಟಿದ್ದಾರೆ.  ಹೊಲ ಗದ್ದೆಗಳಲ್ಲಿ ನಾನು ಕಂಡರೆ ಗುರುತಿಸುವುದನ್ನು ಮರೆಯಬೇಡಿ.

3 comments:

  1. ನಿಮ್ಮ ಪ್ರಯತ್ನ ತುಂಬಾ ಉಪಯುಕ್ತವಾಗಿದ್ದು, ಅವುಗಳ ಜೀವನ ಚರಿತ್ರೆಯನ್ನು ಅಡಿಬರಹದಲ್ಲಿ ಕಾಣಿಸಿದರೆ ಇನ್ನೂ ಉತ್ತಮ. ನಿಮ್ಮ ನಿಸರ್ಗ ಪ್ರೇಮ ಮೆಚ್ಚುವಂತಹದ್ದು : ಶ್ರೀ ಎಂ. ಎಸ್. ಪಾಟೀಲ, ಶಿಕ್ಷಕರು, ಹುಕ್ಕೇರಿ, ಚಿಕ್ಕೋಡಿ

    ReplyDelete
    Replies
    1. ಎಂ.ಎಸ್.ಪಾಟೀಲ. ಗುರುಗಳಿಗೆ ಧನ್ಯವಾದಗಳು, ನಿಮ್ಮ ಸಲಹೆಯಂತೆ ಈ ಹಕ್ಕಿಗಳ ಜೀವನ ಚಿತ್ರಣ ಅಡಿಬರಹದಲ್ಲಿ ಕೆಲವೇ ದಿನಗಳಲ್ಲಿ ಕಾಣಿಸುತ್ತೇನೆ.

      Delete