"ಹಾಲಕ್ಕಿ ನುಡಿತೈತೆ; ಹಾಲಕ್ಕಿ ನುಡಿತೈತೆ " ಎಂದು ಬುಡುಬುಡುಕೆಯವರು ಹೇಳುವ ಕಾಲಜ್ಞಾನದ ನುಡಿಗಳನ್ನು ನೀವು ಕೇಳಿರಬಹುದು. ಬುಡಬುಡಕೆಯವರು ಹೇಳುವ ಹಾಲಕ್ಕಿ ಚಿತ್ರದಲ್ಲಿ ಕಾಣುವ ಪಕ್ಷಿಯೇ ಆಗಿದೆ. ಇವು ನಿಶಾಚರಿಗಳಾಗಿವೆ. ರಾತ್ರಿ ಬೇಟೆಯಾಡುತ್ತವೆ. ಇವುಗಳು ಅರಚುವ ಶಬ್ಧ ಭಯಾನಕವಾಗಿರುತ್ತದೆ. ಈ ಶಬ್ಧವನ್ನು ಕೇಳಿಸಿಕೊಂಡ ಬುಡಬುಡಕೆಯವರು ಆ ಶಬ್ಧವನ್ನು ಅರ್ಥ ಮಾಡಿಕೊಂಡು ? ! ಅದು ಹೇಳುವ ಭವಿಷ್ಯವನ್ನು !!! ಜನರಿಗೆ ಹೇಳುತ್ತಾ ""ಹಾಲಕ್ಕಿ ನುಡಿತೈತೆ, ಹಾಲಕ್ಕಿ ನುಡಿತೈತೆ"" ಎಂದು ಹೇಳುತ್ತಾರೆ.ನಾವೆಲ್ಲ ತಿಳಿದುಕೊಂಡಂತೆ ಈ ಪಕ್ಷಿಗಳು ಅಶುಭದ ಸಂಕೇತವಲ್ಲ, ಇವು ರೈತರ ಮಿತ್ರರಾಗಿವೆ. ಇಲಿ ಹೆಗ್ಗಣಗಳನ್ನು ತಿಂದು ರೈತರಿಗೆ ಉಪಕಾರಿಯಾಗಿವೆ. ಈ ಛಾಯಾಚಿತ್ರದಲ್ಲಿರುವ ಹಾಲಕ್ಕಿ ತನ್ನ ತಲೆಯನ್ನು 180° ಡಿಗ್ರಿವರೆಗೂ ತಿರುಗಿಸಿರುವುದನ್ನು ನೋಡಬಹುದು. ಹಾಲಕ್ಕಿಗಳ ರೆಕ್ಕೆಯ ಪುಕ್ಕಗಳು ಬಹಳ ಮೃದುವಾಗಿರುತ್ತವೆ. ಹಾಗಾಗಿ ಹಾರುವಾಗ ಶಬ್ಧವೇ ಆಗುವುದಿಲ್ಲ.
Subscribe to:
Posts (Atom)
-
""ನತ್ತಿಂಗ"" (Night jar) ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ವಾಪಾಸ್ ಹಡಗಲಿಗೆ ಬರುವಾಗ ಆಗಲೇ ಕತ್ತಲಾಯಿತು. ಐನಳ್ಳಿ ಅಲ್ಲೀಪುರದ ...
-
ಈ ಮಿಂಚುಳ್ಳಿಗಳು ಉಳಿದ ಮಿಂಚುಳ್ಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ. ಸಾಮಾನ್ಯವಾಗಿ ಇವುಗಳು ನೀರಿನ ಜವುಗು ಸ್ಥಳಗಳಲ್ಲಿ ಮೀನಿಗಾಗಿ ಹೊಂಚು ಹಾಕುತ್ತಾ ...
No comments:
Post a Comment