""ನತ್ತಿಂಗ"" (Night jar)
ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ವಾಪಾಸ್ ಹಡಗಲಿಗೆ ಬರುವಾಗ ಆಗಲೇ ಕತ್ತಲಾಯಿತು. ಐನಳ್ಳಿ ಅಲ್ಲೀಪುರದ ಮಧ್ಯೆ ರಸ್ತೆ ಮೇಲೆ ಎರಡು ಪಕ್ಷಿಗಳು ಕುಳಿತಿದ್ದವು. ನಾನು ಬಹಳ ವರ್ಷಗಳಿಂದ ಹುಡುಕುತ್ತಿದ್ದ ಪಕ್ಷಿ "ನತ್ತಿಂಗ" !! ಬೈಕ್ ಬಹಳ ಹತ್ತಿರ ಬಂದರೂ ಹಾರಿಹೋಗದೆ ಕುಳಿತ್ತಿದ್ದವು.ನಿಶಾಚರ ಪಕ್ಷಿಯಾದ ನತ್ತಿಂಗ ಹೆಚ್ಚಾಗಿ ನೆಲದ ಮೇಲೆ ಇರುತ್ತವೆ. ರಾತ್ರಿ ಬೇಟೆಯಾಡುತ್ತವೆ. ತಕ್ಷಣ ಕ್ಯಾಮರಾದ ಕಣ್ಣರಳಿಸಿ ಫೋಟೊ ತೆಗೆದೆ.
ಇಳಿದು ಸ್ವಲ್ಪ ಮುಂದೆ ಹೋದಾಗ ಒಂದು ಪಕ್ಷಿ ಹಾರಿ ಹೋಯಿತು. ಇನ್ನೋಂದು ಅಲ್ಲೇ ಕುಳಿತಿತು. ಇನ್ನೂ ಹತ್ತಿರ ಹೋದಾಗ ಬುರ್ರನೆ ಹಾರಿ ಕತ್ತಲಲ್ಲಿ ಕರಗಿಯೋಯಿತು. ಅದರ ಕಣ್ಣುಗಳು ಕತ್ತಲಲ್ಲೂ ಹೊಳೆಯುತ್ತವೆ. ನೆಲದ ಮೇಲೆಯೇ ಮೊಟ್ಟೆ ಇಟ್ಟು ಮರಿಮಾಡುತ್ತವೆ.
No comments:
Post a Comment