Friday, August 16, 2024

Ruddy Shelduck

 ಬ್ರಾಹ್ಮಣಿಬಾತುಕೋಳಿ

           ಒಂದು ಚಳಿಗಾಲದ ಭಾನುವಾರ ಬೆಳಿಗಿನ ಜಾವ ವಿಪರೀತ ಚಳಿಯಿಂದ ಹೊರಗೆ ಹೋಗಲು ಮನಸ್ಸೇ ಬರುತ್ತಿಲ್ಲ . ಆದರೆ ಪಕ್ಷಿ ಛಾಯಾಗ್ರಹಕರಿಗೆ ಚಳಿಗಾಲದ ಮುಂಜಾನೆಯೆ ಅತ್ಯಂತ ಪ್ರಶಸ್ತವಾದ ಕಾಲಏಕೆಂದರೆ ಚಳಿಗಾಲ ಬಂತೆಂದರೆ  ವಲಸೆ ಹಕ್ಕಿಗಳ  ಕಲರವ  ಶುರುವಾಗುತ್ತದೆ. ಅದರಲ್ಲಿಯೂ ಹೊಳೆಯದಂಡೆಯಲ್ಲಿ, ಬೆಳಗಿನ ಹೊತ್ತಿನಲ್ಲಿ ಹಕ್ಕಿಗಳು ಬಹಳ ಚುರುಕಾಗಿಗದ್ದಲ ಎಬ್ಬಿ ಸುತ್ತ, ಹಾರುವ, ಬೇಟೆಯಾಡುವ, ಜಗಳವಾಡುವ,   ಮರಿಗಳಿಗೆ ಆಹಾರ ಒದಗಿಸುವ, ದೃಶ್ಯವಂತು  ವರ್ಣಿಸಲಸದಳಅದೊಂದು ದೃಶ್ಯ ಕಾವ್ಯ. ಚಳಿಗಾಲ ಶುರುವಾಗಿ 15ದಿನ ಕಳೆದರೂ ಅಲ್ಲೀಪುರದ ಡ್ಯಾಂ ಗೆ ಭೇಟಿ ಕೊಡಬೇಕೆಂಬ ಆಸೆ ಕೈಗೂಡಿದ್ದು ಇವತ್ತೆ. ಮುಂಜಾನೆ ಎದ್ದು, ಹಿರಿಯರೂ, ಪಕ್ಷಿ ಛಾಯಾಗ್ರಹಕರೂ ಆತ್ಮೀಯರು ಆದ ಸುನೀಲ್ ಯಾಳಗಿ ಗುರುಗಳಿಗೆ ಫೋನಾಯಿಸಿ ಅಲ್ಲೀಪುರ ಡ್ಯಾಂ ಗೆ ಹೋಗೋಣ ಬನ್ನಿರಿ, ಎಂದಾಗ ಖುಷಿಯಿಂದ ಒಪ್ಪಿಕೊಂಡು ಬಂದರು.  

               ಅಲ್ಲೀಪುರ ಡ್ಯಾಂನ ಮುಂಭಾಗದಲ್ಲಿ ಕಪ್ಪತ್ತಗಿರಿ ಶ್ರೇಣಿ, ಕಪ್ಪತ್ತಗುಡ್ಡಕ್ಕೆ ಮುತ್ತಿಡುವ ಮೋಡಗಳ ಸಾಲು. ಅದರ ತಪ್ಪಲಿನಲ್ಲಿ ಹರಿಯುವ ತುಂಗಭದ್ರೆಯ ಜುಳುಜುಳು ನಾದನಾನು ಸುನೀಲ್ ಸರ್ ಇಬ್ಬರೂ ಡ್ಯಾಂ ಕೆಳಗಿಳಿದು ನದಿಯ ದಡದಲ್ಲಿ ನಡೆಯುವಾಗ ದೂರದ ಕಲ್ಲು ಬಂಡೆಗಳ ನಡುವೆ ಕೇಸರಿ ಬಣ್ಣದ ಬ್ರಾಹ್ಮಣಿ ಬಾತುಕೋಳಿಗಳು ನೀರಿನಲ್ಲಿ ವಿಹರಿಸುವುದನ್ನು ನೋಡಿ ಆನಂದವಾಯ್ತು. ಏಕೆಂದರೆ ಅವುಗಳನ್ನು ನೋಡಿದ್ದು ಇದೇ ಮೊದಲಬಾರಿ

               ಬ್ರಾಹ್ಮಣಿ ಬಾತುಕೋಳಿಗಳು  ಒಂದು ವಲಸೆ ಹಕ್ಕಿ ಜಾತಿಯಾಗಿದ್ದು, ಮಧ್ಯ ಏಷ್ಯಾ ಮತ್ತು ಯುರೋಪಿನ ಕೆಲವು ಭಾಗಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ. ಮತ್ತು ಹಿಮಾಲಯ ಪ್ರದೇಶ ಸೇರಿದಂತೆ ದಕ್ಷಿಣ ಏಷ್ಯಾದಲ್ಲಿ ಚಳಿಗಾಲದ ತಿಂಗಳುಗಳನ್ನು ಕಳೆಯುತ್ತದೆ. ಸಾಮಾನ್ಯವಾಗಿ ಅಕ್ಟೋಬರ್ ಮತ್ತು ನವೆಂಬರ್ ನಡುವೆ ಅಲ್ಲೀಪುರ ಡ್ಯಾಂ ಪ್ರದೇಶಕ್ಕೆ ಆಗಮಿಸುತ್ತದೆ ಮತ್ತು ಮಾರ್ಚ್ ಅಥವಾ ಏಪ್ರಿಲ್ ವೇಳೆಗೆ ಹೊರಡುತ್ತದೆ 

                ಬ್ರಾಹ್ಮಣಿಬಾತುಕೋಳಿಗಳು  (Ruddy Shelduck) ಹಿಮಾಲಯ ಪರ್ವತ ಶ್ರೇಣಿಯ ಮೇಲಿನಿಂದ ಅವುಗಳನ್ನು ದಾಟಿ ಭಾರತಕ್ಕೆ ಬರುತ್ತವೆ. ಹಿಮಾಲಯ ಪರ್ವತಗಳ ಮೇಲೆ ಆಮ್ಲಜನಕ ಇರುವುದೇ ಇಲ್ಲ, ಆದರೂ ಹಕ್ಕಿಗಳು ಆಮ್ಲಜನಕ ಇಲ್ಲದೇ ಹೇಗೆ ಹಿಮಾಲಯ ದಾಟುತ್ತವೆ ಎನ್ನುವುದೇ ಸೋಜಿಗ.! 

                 ಮಂಗೋಲಿಯಾ, ಟಿಬೆಟ್ ಮತ್ತು ರಷ್ಯಾದ ಕೆಲವು ಭಾಗಗಳನ್ನು ಒಳಗೊಂಡಂತೆ ಮಧ್ಯ ಏಷ್ಯಾದ ಎತ್ತರದ ಪ್ರದೇಶಗಳಲ್ಲಿ ಬಾತುಕೋಳಿ ಗಳು ಸಂತಾನೋತ್ಪತ್ತಿ ಮಾಡುತ್ತವೆ. ಸಂತಾನೋತ್ಪತ್ತಿ ಅವಧಿಯಲ್ಲಿ, ಇವುಗಳು ಸರೋವರಗಳು ಮತ್ತು ನದಿಗಳ ಬಳಿ ಜೌಗು ಪ್ರದೇಶಗಳು ಮತ್ತು ಜವುಗು ಪ್ರದೇಶಗಳಲ್ಲಿ ವಾಸಿಸುತ್ತವೆ. ಚಳಿಗಾಲದ ತಿಂಗಳುಗಳಲ್ಲಿ, ರಡ್ಡಿ ಶೆಲ್ಡಕ್ಸ್ ಭಾರತೀಯ ಉಪಖಂಡ ಮತ್ತು ಆಗ್ನೇಯ ಏಷ್ಯಾದ ಭಾಗಗಳನ್ನು ಒಳಗೊಂಡಂತೆ ದಕ್ಷಿಣ ಏಷ್ಯಾದ ಬೆಚ್ಚಗಿನ ಪ್ರದೇಶಗಳಿಗೆ ವಲಸೆ ಬರುತ್ತವೆ

            ಬ್ರಾಹ್ಮಣಿ ಬಾತುಕೋಳಿಗಳನ್ನು  ಇಂಟರ್ನ್ಯಾಷನಲ್ ಯೂನಿಯನ್ ಫಾರ್ ಕನ್ಸರ್ವೇಶನ್ ಆಫ್ ನೇಚರ್ (IUCN) ಸಂಸ್ಥೆಯವರು ಹಕ್ಕಿಗಳನ್ನು ಅಳಿವಿನ ಅಂಚಿನಲ್ಲಿರುವ ಹಕ್ಕಿ ಗಳೆಂದು ಘೋಷಿಸಿರುತ್ತದೆ. , ಆದರೆ ಅವು ಆವಾಸಸ್ಥಾನದ ನಷ್ಟ, ಬೇಟೆ ಮತ್ತು ಮಾಲಿನ್ಯದಿಂದ ಬೆದರಿಕೆಯನ್ನು ಎದುರಿಸುತ್ತವೆನೀನೇನಾದರೂ ಚಳಿಗಾಲದ ತಿಂಗಳುಗಳಲ್ಲಿ ಅಲ್ಲೀಪುರ ಡ್ಯಾಂ ಗೆ ಭೇಟಿ ಕೊಟ್ಟಾಗ ಇವುಗಳನ್ನು ನೋಡಿ ಗುರುತಿಸಲು ಮರೆಯಬೇಡಿ


No comments:

Post a Comment