Thursday, January 24, 2019

ಬಿಳಿ ಕಂಠದ ಮಿಂಚುಳ್ಳಿ (White throated Kingfisher)


ಈ ಮಿಂಚುಳ್ಳಿಗಳು ಉಳಿದ ಮಿಂಚುಳ್ಳಿಗಳಿಗಿಂತ ಗಾತ್ರದಲ್ಲಿ ದೊಡ್ಡದಾಗಿರುತ್ತವೆ.   ಸಾಮಾನ್ಯವಾಗಿ ಇವುಗಳು ನೀರಿನ ಜವುಗು ಸ್ಥಳಗಳಲ್ಲಿ ಮೀನಿಗಾಗಿ ಹೊಂಚು ಹಾಕುತ್ತಾ ಎತ್ತರದ ಮರದ ರೆಂಬೆಯ ಮೇಲೆ, ವಿಧ್ಯುತ್ ತಂತಿಗಳ ಮೇಲೆ ಕುಳಿತಿರುವುದನ್ನು ನೋಡಬಹುದು. ಇವುಗಳು ಉಳಿದ ಮಿಂಚುಳ್ಳಿಗಳಂತೆ ಹೆಲಿಕಾಪ್ಟರ್ ತರ ಒಂದೇ ಕಡೆ ಗಾಳಿಯಲ್ಲಿ ಹಾರುತ್ತಾ ಮೀನಿನ ಮೇಲೆ ಎರಗಲು ಬರುವುದಿಲ್ಲ.  ಮೀನು ಕಂಡ ತಕ್ಷಣ ನೇರವಾಗಿ ಅದರ ಮೇಲೆರಗಿ ಹಿಡಿದು ನೀರಿನಿಂದ ಆಕಾಶಕ್ಕೆ ಚಿಮ್ಮಿ ಹಾರುತ್ತವೆ.  ಪ್ರಸ್ತುತ ಫೋಟೋ ಹಡಗಲಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿಯ ಹತ್ತಿರ ತೆಗೆದದ್ದು.

No comments:

Post a Comment